Assignment 10
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ ತಾ : ಔರಾದ ( ಬಾ
)
|
ಅಸೈನ್ಮೆಂಟ್-10 |
|
ಶಿಕ್ಷಕರ ಹೆಸರು
: ಶ್ರೀ ಚಂದ್ರಕಾಂತ
|
|
ವಿಷಯ : ಕೋವಿಡ್-19
ವೈರಸ್ ಸೋಂಕು
ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತೃಷ್ಟಗೊಳಿಸುವಲ್ಲಿ ( ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ) ತಮ್ಮ ಸಲಹೆ ಮತ್ತು ಕಾಯ೯ತಂತ್ರಗಳ ಪಟ್ಟಿ |
|
ಕೋವಿಡ್-19 ವೈರಸ್
ಅತಿವೇಗವಾಗಿ ಹರಡುತ್ತಿರುವ ಪ್ರಯುಕ್ತ ಸದ್ಯದ ಪರಿಸ್ತಿಯಲ್ಲಿ
ಶಾಲೆ ಪ್ರಾರಂಭದ ಕನಸು ಕನಸಾಗಿಯೇ ಉಳಿದಿದೆ. ಹಾಗಾದರೆ
ಮಕ್ಕಳ ಕಲಿಕೆ ಮುದುವರೆಸುವುದು ಹೇಗೆ ಎಂಬ ಚಿಂತೆಯಲ್ಲಿಯೇ
ನಮ್ಮ ಕಲಬುಗಿ೯
ಅಪರ ಆಯುಕ್ತರು ಶಿಕ್ಷಕರಿಗೆ ಇಂತಹ ಸಂದಭ೯ದಲ್ಲಿ
ಹತ್ತು ಅಸೈನ್ಮೆಂಟುಗಳ ನೀಡುವುದರ ಮುಖಾಂತರ ಮಕ್ಕಳ ಹಾಗು ಪೋಷಕರ ಸಂಪಕ೯ದಲ್ಲಿರುವಂತೆ ಹಾಗೂ
ಮಕ್ಕಳ ಕಲಿಕೆಯ ಬಗ್ಗೆ ವಿಚಾರಿಸಲು ಮೋಬೈಲ್ ಮುಖಾಂತರ
ಮುಂದು ವರೆಸಲು ಸೂಚಿಸಿರುತ್ತಾರೆ. ಅದರಂತೆ ನಾನು ನನ್ನ
ವಿದ್ಯಾಥಿ೯ಗಳಿಗೆ ಕಲಿಕೆಯ ಬಗ್ಗೆ ಕಾಯ೯ತಂತ್ರಗಳನ್ನು ಮಾಡಿದ್ದೇನೆ. 1)
ಪ್ರತಿ ನಿತ್ಯ ಎಲ್ಲಾ ವಿದಾಥಿ೯ಗಳಿಗೆ ಮೋಬೈಲ್ ಮುಖಾಂತರ ಕರೆ ಮಾಡಿ ಅವರ ಆರೋಗ್ಯ ವಿಚಾರಿ ನಂತರ ಅವರಿಗೆ ಅಭ್ಯಾಸ ಮಾಡಲು
ಪ್ರೇರೆಪಿಸುವುದು. 2)
ಅವರಿಗೆ
ಕಲಿಕೆ ಹೊರೆ ಆಗದಂತೆ ಪ್ರತಿ ದಿನ ಒಂದೊಂದು ವಿಷಯದ ಮೇಲೆ ಅಭ್ಯಾಸ ಮಾಡಲು ಫೋನ್ ಮೂಲಕ ತಿಳಿಸುವುದು. 3)
ವಿದ್ಯಾಥಿ೯ಗಳಿಗೆ ನೀಡಿದ ಅಭ್ಯಾಸವನ್ನು
ಮಾಡಲು ಪಾಲಕರಿಗೆ ನೋಡುವಂತೆ ಸಲಹೆ ನೀಡುವುದು. 4)
ವಾರದಲ್ಲಿ
ಒಂದು ಸಲವಾದರೂ ಶಾಲೆಗೆ ಹೋಗಿ ಮಾಡಿರುವ ಅಭ್ಯಾಸದ ಬಗ್ಗೆ ಖಚಿತ ಪಡಿಸಿಕೊಳ್ಳವುದು. 5)
ವಿದ್ಯಾಥಿ೯ಗಳಿಗೆ
ದಿನನಿತ್ಯ ಅಭ್ಯಾಸ ಮಾಡಲು ಒಂದು ವೇಳಾಪಟ್ಟಿಯನ್ನು ಕೊಡುವುದು. 6)
ದಿನನಿತ್ಯ
ಬೆಳಿಗ್ಗೆ ಹಾಗೂ ಸಂಜೆ ಮಕ್ಕಳ ಓದಿನ ಬಗ್ಗೆ ಕಾಳಜಿವಹಿಸಲು ಪಾಲಕರಿಗೆ ತಿಳಿಸುವುದು. 7)
ಎಲ್ಲಾ
ವಿಷಯಗಳು ಓದುವಂತೆ ಮಕ್ಕಳಿಗೆ ಹೇಳುವುದು. 8)
ಮಕ್ಕಳಿಗೆ
ಓದುವ ಸಮಯದಲ್ಲಿ ಅಥ೯ವಾಗದ ವಿಷಯ ಫೋನ್ ಮೂಲಕ
ಕೇಳುವಂತೆ ತಿಳಿಸುವುದು. 9)
ಪಾಲಕರ
ಫೊನ್ ನಲ್ಲಿ ವ್ಯಾಟ್ಸ್ಯಾಪ ಸೌಲಭ್ಯ ವಿದ್ದರೆ ಮಾಡಿರುವ ಲೆಕ್ಕಗಳಾಗಲಿ , ಶುದ್ಧಬರಹವಾಗಲಿ ವ್ಯಾಟ್ಸ್ಯಾಪ ಮೂಲಕ ಕಳುಹಿಸಿಕೊಡುವಂತೆ ತಿಳಿಸುವುದು. 10) ಪೋನ್ ಮೂಲಕ
ಮಕ್ಕಳಿಗೆ ಮಗ್ಗಿಗಳನ್ನು ಕೇಳಿಸಿಕೊಳ್ಳುವುದು. |
ಮುಖೋಪಾಧ್ಯಾಯರ ಸಹಿ
ಶಿಕ್ಷಕರ ಸಹಿ